Wednesday, October 15, 2008

ಬಾಂಧವ್ಯ....

ಮೂರಕ್ಷರದ ಈ ಪದ ಯಾರನ್ನಾದರೂ, ಎಲ್ಲಾದರೂ ಒಂದುಗೂಡಿಸಬಲ್ಲದು. ಒಂದೊಮ್ಮೆ ಪ್ರೀತಿಯ ಮುಖೇನ ಹತ್ತಿರ ತಂದರೆ ಮಗದೊಮ್ಮೆ ಕಚ್ಚಾಡುತ್ತಲೇ ಒಂದಾಗಿಸುತ್ತದೆ. ಅಂಥದ್ದೇ ಪ್ರೀತಿ ನನ್ನದು ಮತ್ತು ನಾನು ಇಷ್ಟು ದಿನ ಹುಡುಕಾಟದಲ್ಲಿದ್ದ ನನ್ನ ಅಣ್ಣನದ್ದು....
ಹೌದು.... ಚಿಕ್ಕಂದಿನಿಂದಲೂ ನನ್ನ ಗೆಳತಿಯರು ಅವರ ಅಣ್ಣನ ಬಗ್ಗೆ ಹೇಳುವುದಾಗಲೀ, ಇಲ್ಲ ಅವರೊಡನೆ ಪ್ರೀತಿಯಿಂದಿರುವುದು ನೋಡಿದಾಗ ಅದೇಕೋ ಪಿಚ್ಚೆನಿಸುತ್ತಿತ್ತು. ಅದು ಈರ್ಷೆಯಲ್ಲ. ಬದಲಾಗಿ ನನ್ನನ್ನು ಮುದ್ದಿಸುವ, ತಪ್ಪು ಮಾಡಿದರೆ ಗದರುವ, ಪ್ರೀತಿಯಿಂದ ಕೆನ್ನೆ ಸವರುವ ಅಣ್ಣ ನನಗಿಲ್ಲವಲ್ಲ ಎಂಬ ಕೊರಗು ಅಷ್ಟೇ.... ಅದಕ್ಕಾಗೇ ಯಾವುದೇ ಹುಡುಗರನ್ನು ಕಂಡರೂ ಅವರ ಕಣ್ಣಲ್ಲೊಮ್ಮೆ ಇಣುಕುತ್ತಿದ್ದೆ. ಇವನಲ್ಲಿ ನನ್ನನ್ನು ತಂಗಿಯಂತೆ ಪ್ರೀತಿಸುವ ಮನಸಿದೆಯೇ, ಆ ಆಂತರ್ಯವಿದೆಯೇ ಅಂತ ಇಂಚಿಂಚೂ ಬಿಡದೆ ಪರೀಕ್ಷಿಸುತ್ತಿದ್ದೆ.
ಆದರೆ ಫಲಿತಾಂಶ ಮಾತ್ರ ಶೂನ್ಯ.... ಅಲ್ಲಿದ್ದ ದುರುದ್ದೇಶ ನನ್ನ ಕಣ್ಣಂಚಲ್ಲಿ ನೀರು ತರಿಸುತ್ತಿತ್ತು. ಹೀಗೇ ಬರೀ ಹಾತೊರೆಯುತ್ತಲೇ ನನ್ನ ದಿನಗಳು ಉರುಳುತ್ತಿದ್ದವು.
ಆದರೆ ಎಲ್ಲಿದ್ದನೋ ಆ ಧಾಂಡಿಗ.....
ಎದುರು ಬಂದು ನಿಂತುಬಿಟ್ಟ.....
ಲೇ ಹುಡುಗಿ ಸುಮ್ನೆ ಯಾಕೆ ಕೊರಗ್ತೀ???? ನಿನಗೆ ಅಣ್ಣ ಅಂತ ಕರೆಯೋಕೆ ನಾನಿಲ್ಲವಾ ಅಂತ ಗದರಿದ. ಮೊದಲು ಅಣ್ಣ ಇಲ್ಲ ಅನ್ನೋ ಕೊರಗನ್ನ ಮನಸ್ಸಿಂದ ತೆಗೆದುಹಾಕು ಅಂತ ಪ್ರೀತಿಯಿಂದ ತಲೆ ಸವರಿದ... ಅಷ್ಟೇ... ಎಲ್ಲಿತ್ತೋ ಕಣ್ಣಲ್ಲಿ ನೀರು, ಸಂತೋಷದಲ್ಲಿ ಮಿಂದೆದ್ದು ತಡೆಯೇ ಇಲ್ಲದೆ ಹರಿಯತೊಡಗಿತು. ಅಂತೂ ನಾನು ಹಂಬಲಿಸಿದ, ಸದಾ ಕಾಯುತ್ತಿದ್ದ ಮನದಲ್ಲಿ ರಿಸರ್ವ ಮಾಡಿಟ್ಟಿದ್ದ ಜಾಗಕ್ಕೆ ಸರಿಯಾದವನೇ ಬಂದ ಅನ್ನೋ ಖುಷಿ.

ಹೌದು, ಯಾವಾಗಲೂ ನಮ್ಮ ಬಳಿ ಏನಿಲ್ಲವೋ ಅದೇ ಹೆಚ್ಚು ಕಾಡಿಸೋದು. ಮತ್ತೆ ಮತ್ತೆ ಕಣ್ಣೆದುರೇ ನಿಂತು ಅಣಕಿಸುವುದೂ ಅದೇ.. ಆದರೆ ಇಷ್ಟು ದಿನ ನಾನು ಕೊರಗಿದ್ದಕ್ಕೆ ಒಬ್ಬ ಅಣ್ಣ... ಒಬ್ಬನೇ ಒಬ್ಬ ಅಣ್ಣ.... ಸಿಕ್ಕಿಬಿಟ್ಟನಲ್ಲ... ಅದೇ ಪರಮಾನಂದ ;೦)

9 comments:

ಹರೀಶ ಮಾಂಬಾಡಿ said...

touching..

laxmi machina said...

chennagide

Sampath said...

AA dadiyaa yaaru?ellinda banda avanannu neenu hege nambide?avanalli kanda bhatRutavada bagge swalpa vivaraNe koDuttIya? annandirillada itararigu anukOOlavaaguttade.

prashant natu said...

nice article...very much touching......
prashant natu new delhi

Shashanka G P (ಉನ್ಮುಖಿ) said...

ಬ್ಲಾಗಿನ ಹೆಸರಿನಲ್ಲಿ ತಪ್ಪಿದೆ, ಅದು "ನಿಹಾರಿಕೆ" ಅಲ್ಲ "ನೀಹಾರಿಕೆ".

Unknown said...

Hello Kruthi,
Chennagide nimma baravanige...haagu bhavane vyakthapadisiruva bage..idhu ellarallu satya.....bhandhavya beseyalu nambike beku...ade konevaregu uliyalu Nambike-Vishwasave beraagabeku....elavu sari...eshtadharu.."iruvudellava bittu iradhudharedege thudivude jeevana"....allave......
Shubhavaagali..yavaagalu santhosha thumbirali nimma baalali endashisuva
nimma snehitha...
Kiran C N

Ranjana Shreedhar said...

chennagide nimma baravanige...

ನನ್ನ ಬ್ಲಾಗಿನಲ್ಲಿ 'ಅಮ್ಮನ ಮನ ನೋಯಿಸಿದ್ದಕ್ಕೆ ದೇವರು ಶಾಪವಿತ್ತನಾ....?!' ಅನ್ನೋ ಒಂದು ಬರಹ ಹಾಕಿದ್ದೇನೆ. ಬಿಡುವಾದಾಗ ಒಮ್ಮೆ ಭೇಟಿ ಕೊಟ್ಟು, ಅನಿಸಿಕೆ ತಿಳಿಸಿ...
http://ranjanashreedhar.blogspot.com/

ಧನ್ಯವಾದಗಳು...
ರಂಜನ ಶ್ರೀಧರ್ ....

ಚಕ್ಕುಲಿ ಚಂದಿರ said...

ಈ ಪ್ರಶ್ನೆ ಶಶಾಂಕ್್ಗೆ...
ನಕ್ಷತ್ರ ಪುಂಜಕ್ಕೆ ನಿಹಾರಿಕೆ ಅಂತಾರೆ. ಆದರೆ ನೀಹಾರಿಕೆ ಅಂದರೆ ಅರ್ಥವಾಗಲಿಲ್ಲವಲ್ಲ...
ಸರಿಯಾದ ಪದ ಯಾವುದು ತಿಳಿಸಿ....
ಕೃತಿಕ...

Shashanka G P (ಉನ್ಮುಖಿ) said...

"ನೀಹಾರಿಕೆ" ಸರಿಯಾದ ಪದ.
ಕನ್ನಡ ರತ್ನಕೋಶವನ್ನೊಮ್ಮೆ ನೋಡಿ.